Prajadwani

ಕರ್ನಾಟಕದ ಸುಪ್ರಸಿದ್ದ ಐತಿಹಾಸಿಕ ಸ್ಥಳಗಳು

ವೀಕ್ಷಕರೇ ನಮಸ್ಕಾರ.

ಕರ್ನಾಟಕವು ಹಲವಾರು ಮಹತ್ವದ ಘಟನೆಗಳನ್ನು ಕಂಡಿದೆ. ಅದಲ್ಲದೆ ವಿದೇಶಿ ಸಂಸ್ಕೃತಿಗಳೊಂದಿಗೆ ಸಹಬಾಲ್ವೆ ಕೂಡ ನಡೆಸಿದೆ.ಕಾಲ ನಂತರದಲ್ಲಿ ಒಂದು ಉತ್ತಮ ರಾಜ್ಯವಾಗಿ ಐತಿಹಾಸಿಕ  ಸ್ಮಾರಕಗಳ ಸ್ವರ್ಗವಾಗಿ. ಹಲವಾರು ಕೋಟೆಗಳು, ದೇವಾಲಯಗಳು, ಬರಹಗಳು, ಸ್ಮಾರಕಗಳು ಮತ್ತು ಕಲೆಗಳು ಕರ್ನಾಟಕದ ಮಡಿಲಲ್ಲಿ ಕಾಣಸಿಗುತ್ತದೆ. ಇತಿಹಾಸದ ಬಗ್ಗೆ ತಿಳಿಯುವ ಕನಸುಳ್ಳ ಪ್ರತಿಯೊಬ್ಬರೂ ಕರ್ನಾಟಕಕ್ಕೆ ಭೇಟಿ ಕೊಡುವುದು ಸ್ವರ್ಗವೆಂದೇ ಬಾವಿಸುತ್ತಾರೆ.ಇದಕ್ಕೆ ಪ್ರತಿರೂಪವಾಗಿ ನಾವು ಕರ್ನಾಟಕದಲ್ಲಿ ಹೆಸರುವಾಸಿಯಾಗಿರುವ  ಐತಿಹಾಸಿಕ ಸ್ಥಳಗಳ ಬಗ್ಗೆ ಮಾಹಿತಿಯನ್ನು ನೀಡುತ್ತೆವೆ.

1.ಅಂಬಾವಿಲಾಸ ಅರಮನೆ – ಮೈಸೂರು

ಮೈಸೂರಿನ ಹೃದಯ ಬಾಗದಲ್ಲಿ ಚಾಮುಂಡಿ ಬೆಟ್ಟಕ್ಕೆ ಪೂರ್ವಾಭಿಮುಖವಾಗಿ ಅಂಬಾವಿಲಾಸ ಅರಮನೆ ಇದೆ. ಇದು ಒಡೆಯರ್ ರಾಜವಂಶದ ಅಧಿಕೃತವಾದ ನಿವಾಸ ಹಾಗೂ ಕರ್ನಾಟಕದ ಅತ್ಯಂತ ಸುಪ್ರಸಿದ್ದ ಐತಿಹಾಸಿಕ ಸ್ಮಾರಕಗಳಲ್ಲಿ ಮೊದಲನೇ ಸ್ಥಾನದಲ್ಲಿದೆ ಪ್ರತಿ ವರ್ಷ ಸುಮಾರು 80 ಲಕ್ಷ ಪ್ರಯಾಣಿಕರು ಅರಮನೆಗೆ ಭೇಟಿ ನೀಡುತ್ತಾರೆ.

2. ಬೀದರ್ ಕೋಟೆ –  ಬೀದರ್

ಕರ್ನಾಟಕದ  ಪ್ರಾಚೀನ  ರಾಜವಂಶದ ಅಧಿಕೃತ ವಾಸ್ತುಶಿಲ್ಪದ ಭವ್ಯತೆಯನ್ನು ಹೊಂದಿರುವ ಐತಿಹಾಸಿಕ ಹೆಗ್ಗುರುತಾಗಿರುವ ಹಾಗೂ ದಕ್ಶಿಣ ಬಾರತದ ರಾಜವಂಶಗಳ ಹೆಮ್ಮೆಯ ಪ್ರತಿರೂಪದಲ್ಲಿ ಬೀದರ್ ಕೋಟೆ ಯೂ ಒಂದು.ಈ ಕೋಟೆಯನ್ನು ಈಗ ಬಾರತದ ಅಪರೂಪದ ಸ್ಥಳ ಎಂದು ಪರಿಗಣನೆಗೆ ತೆಗೆದುಕೊಳ್ಳಲಾಗಿದೆ. ಬೀದರ್ ಕೋಟೆಯು ತನ್ನ ಮೂಲ ರೂಪವನ್ನು ಕಳೆದುಕೊಂಡಿದ್ದರೂ ಕೂಡ ಈ ಭವ್ಯವಾದ ಕೋಟೆಯು ಅನೇಕ ಇತಿಹಾಸವನ್ನು ಹೊಂದಿದೆ.ಅಲ್ಲದೆ ಕಾಕಾತಿಯರು ಚಾಲುಕ್ಯರು ,ಶಾತವಾಹನರು ಮತ್ತು ಯಾದವರು ಸೇರಿದಂತೆ ಹಲವಾರು ರಾಜವಂಶಗಳ ಏಳು -ಬಿಳುಗಳಿಂದ ಕಂಡಿದೆ. ಇವರ ಪತನದ ನಂತರ ಇದು ಮೊಘಲರ ಮತ್ತು ನಿಜಾಮರಿಂದ ಆಳಲ್ಪಟ್ಟಿತು.

3. ಬಾದಾಮಿ – ಬಾಗಲಕೋಟೆ

ಬಾದಾಮಿಯು ಗುಹಾಂತರ ದೇವಾಲಯಗಳಾಗಿದ್ದು ಇಲ್ಲಿ ಹಿಂದೂಗಳ 4 ಗುಹಾಂತರ ದೇವಾಲಯವಿದೆ. 7 ನೇ ಶತಮಾನದ ಬಾದಾಮಿ ಚಾಲುಕ್ಯ  ವಾಸ್ತುಶಿಲ್ಪ ಶೈಲಿಯ ಒಂದು ಅದ್ಬುತ ಕೆತ್ತನೆ.

4.ವಿಜಯನಗರ ಸಾಮ್ರಾಜ್ಯ – ಹಂಪಿ

ವಿಜಯನಗರ ಸಾಮ್ರಾಜ್ಯ ಹಂಪಿ ಕರ್ನಾಟಕ  ಕಂಡ  ಐತಿಹಾಸಿಕ ಸಾಮ್ರಾಜ್ಯ. ಇಲ್ಲಿನ ಸ್ಮಾರಕಗಳು ದೇವಾಲಯಗಳು. ಬೆಟ್ಟ ಗೋಪುರಗಳು,  ಮಸೀದಿಗಳು ಸಮಾದಿಗಳು. ಕಾರಂಜಿ ಗಳು. ನೋಡುಗರ ಮನ ಸೂರೆಗೊಳ್ಳುವಂತೆ ಮಾಡುತ್ತವೆ.

5.ಪಟ್ಟದಕಲ್ಲು – ಬಾಗಲಕೋಟೆ

ಪಟ್ಟದಕಲ್ಲು ‘ಮಾಣಿಕ್ಯನಗರ’  ಎಂಬ ಹೆಮ್ಮೆಗೆ ಪಾತ್ರವಾಗಿರುವ ಕರ್ನಾಟಕದ  ಐತಿಹಾಸಿಕ ಸ್ಥಳಗಳಲ್ಲಿ ಒಂದಾಗಿದೆ.  ಅಲ್ಲದೆ ಚಾಲುಕ್ಯ  ಸ್ಮಾರಕಗಳಿಗೆ ಸಾಕ್ಷಿಯಾಗಿರುವ ಈ  ಸ್ಥಳವು ವಿಶ್ವ ಪರಂಪರೆಯ ತಾಣವೂ ಹೌದು. ಈ  ಸ್ಥಳವು ಮಲ ಪ್ರಭಾ ನದಿ ದಡದಲ್ಲಿರುವ ಒಂದು ಹಳ್ಳಿ ಯಾಗಿದ್ದು ಇಲ್ಲಿ ಹತ್ತು ದೇವಾಲಯ ಗಳ ನೆಲೆಯಾಗಿದೆ ಮತ್ತು ಪ್ರತಿಯೊಂದು ತನ್ನದೇ ಆದ ಭವ್ಯತೆಯನ್ನು ಹೊಂದಿದೆ.

6. ಮೇಲುಕೋಟೆ – ಮಂಡ್ಯ

ಕರ್ನಾಟಕದ ಮಂಡ್ಯ ಜಿಲ್ಲೆಯಲ್ಲಿರುವ ಮೇಲುಕೋಟೆಯು ಒಂದು ಪವಿತ್ರ ಸ್ಥಳ ವಾಗಿದೆ. ಯುದುಗಿರಿ ಕಲ್ಲಿನ ಬೆಟ್ಟಗಳ  ಮೇಲೆ ಇರುವ ಮೇಲುಕೋಟೆ ಶ್ರೀ ಛೆಲುವನಾರಾಯಣ  ಸ್ವಾಮಿ ದೇವಾಲಯವಿದೆ. ಈ ಪಟ್ಟಣವು ವಿವಿಧ ಕೊಳಗಳು ಮತ್ತು ದೇವಾಲಯಗಳ ನೆಲೆಯಾಗಿದೆ.

7. ಬಿಜಾಪುರ ಕೋಟೆ – ಬಿಜಾಪುರ

ಬಿಜಾಪುರವು ದಕ್ಷಿಣ ಭಾರತದ ಆಗ್ರಾ ವೆಂದು  ಪ್ರಸಿದ್ದಿಯನ್ನು ಪಡೆಡಿದ್ದು ಇದು ಕರ್ನಾಟಕದ ಹೆಸರು ವಾಸಿ ಯಾಗಿರುವ ಐತಿಹಾಸಿಕವಾದ ಸ್ಥಳಗಳಲ್ಲಿ  ಒಂದೆನಿದೆ.  ಅವುಗಳಲ್ಲಿ ಕರ್ನಾಟಕದ ಬಿಜಾಪುರ ನಗರಗಳಲ್ಲಿ ಭವ್ಯವಾಗಿ ತಲೆ ಎತ್ತಿ ನಿಂತಿರು ವ ಬಿಜಾಪುರ ಕೋಟೆ ಯೂ ಒಂದು.ಇದನ್ನು 1866 ರ ಅಧಿಲ್ ಶಾ ಆಡಳಿತದ ಅವಧಿಯಲ್ಲಿ ನಿರ್ಮಿಸಲಾಗಿದೆ.ಈ  ಕೋಟೆಯು ವಿಶಾಲವಾದ ವಿಸ್ತಾರದಲ್ಲಿ ಹರಡಿದೆ ಮತ್ತು 50 ಅಡಿ  ದೊಡ್ಡ ಕಂದಕದೂಳಗೆ ಸುತ್ತು ವರೆದಿದೆ.

8.ಬೆಳವಾಡಿ – ಚಿಕ್ಕಮಗಳೂರು

ಬೆಳವಾಡಿಯು ಕರ್ನಾಟಕದ ಚಿಕ್ಕಮಗಳೂರಿನಲ್ಲಿದ್ದು. ಸಣ್ಣ ಪಟ್ಟಣವಾದ ಈ ಸ್ಥಳವು ಅನೇಕ ಮನಮೋಹಕ ದೇವಾಲಯ ಗಳನ್ನು ಹೊಂದಿದೆ. ಬೆಳವಾಡಿಯ ಆಸುಪಾಸಿನಲ್ಲಿರುವ ಎಲ್ಲಾ ದೇವಾಲಯಗಳು ಹೊಯ್ಸಳರ ವಾಸ್ತುಶಿಲ್ಪದ ಲ್ಲಿ ನಿರ್ಮಿಸಲ್ಪಟ್ಟಿದೆ. ಮತ್ತು ಚಕ್ರವ್ಯೂಹ  ಕೆತ್ತನೆ ಗಳನ್ನು ಹೊಂದಿದೆ.  ವಿಷ್ಣುವಿಗೆ ಅರ್ಪಿತವಾದ ವೀರ ನಾರಾಯಣ ದೇವಾಲಯವು ಇಲ್ಲಿನ  ಅತ್ಯಂತ ಪ್ರಸಿದ್ಧ ರಚನೆಯಾಗಿದೆ. ಈ  ದೇವಾಲಯದ ಒಂದು ಕುತೂಹಲಕಾರಿಯಾದ ಸಂಗತಿ ಎಂದರೆ  ಪ್ರತೀ ವರ್ಷ 23 ರಂದು ಸೂರ್ಯನ ಕಿರಣ ಗಳು  ನೇರವಾಗಿ ದೇವಾಲಯದ ಗರ್ಭಗುಡಿಗೆ ಪ್ರವೇಶಿಸುತ್ತದೆ.

Exit mobile version