Prajadwani

J&K ನಲ್ಲಿ ಮತ್ತೆ ಭಯೋತ್ಪಾದಕರ ದಾಳಿ, ಗುಂಡಿನ ಚಕಮಕಿಯಲ್ಲಿ CRPF ಸೈನಿಕ ಹುತಾತ್ಮ , 6 ಮಂದಿಗೆ ಗಾಯ

ಶ್ರೀನಗರ: ನಿನ್ನೆತಡರಾತ್ರಿ ಜಮ್ಮು ಮತ್ತು ಕಾಶ್ಮೀರದ ಕಥುವಾ ಗ್ರಾಮದಲ್ಲಿ ನಡೆದ ಭಯೋತ್ಪಾದಕ ಕಾರ್ಯಾಚರಣೆಯಲ್ಲಿ ಭಾರತೀಯ ಸೈನಿಕರು ಓರ್ವ ಉಗ್ರನನ್ನು ಹತ್ಯೆಗೈದಿದ್ದಾರೆ . ಕಾರ್ಯಾಚರಣೆಯಲ್ಲಿ CRPF ಭಾರತೀಯ ಯೋಧನೊಬ್ಬರು ಹುತಾತ್ಮರಾದರು.
ಜಮ್ಮುವಿನಲ್ಲಿ ರಾತ್ರೋರಾತ್ರಿ ಆರಂಭವಾದ ಭಯೋತ್ಪಾದಕರ ಕಾರ್ಯಾಚರಣೆಯಲ್ಲಿ ಉಗ್ರರನ್ನು ಸದೆಬಡಿದ ಸೇನೆ ಆರಂಭಿಕ ಗುಂಡಿನ ಚಕಮಕಿಯಲ್ಲಿ ಐವರು ಸೈನಿಕರು ಮತ್ತು ವಿಶೇಷ ಪೊಲೀಸ್ ಅಧಿಕಾರಿ (ಎಸ್‌ಪಿಒ) ಗಾಯಗೊಂಡಿರುವ ಮಾಹಿತಿ ದೊರಕಿದೆ.
ಜಮ್ಮುವಿನಲ್ಲಿ ಈ ಭಯೋತ್ಪಾದಕರು ಎರಡು ದಿನಗಳ ಹಿಂದೆ, ಯಾತ್ರಾರ್ಥಿಗಳನ್ನು ಹೊತ್ತೊಯ್ಯುತ್ತಿದ್ದ ಬಸ್ ಮೇಲೆ ದಾಳಿ ಮಾಡಿ ಒಂಬತ್ತು ಪ್ರಯಾಣಿಕರನ್ನು ಕೊಂದಿದ್ದರು.
ಕಥುವಾದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿರುವ ಜಮ್ಮು ವಲಯದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಆನಂದ್ ಜೈನ್ ಅವರು ಇಂದು ಬೆಳಿಗ್ಗೆ ಎನ್‌ಕೌಂಟರ್‌ಗಳ ಬಗ್ಗೆ ವಿವರಗಳನ್ನು ನೀಡಿದರು.

ದೋಡಾ ಘಟನೆಯ ಕುರಿತು ಅವರು, ನಿನ್ನೆ ತಡರಾತ್ರಿ ಚಟರ್ಗಾಲಾ ಪ್ರದೇಶದ ಸೇನಾ ನೆಲೆಯಲ್ಲಿ ಪೊಲೀಸರು ಮತ್ತು ರಾಷ್ಟ್ರೀಯ ರೈಫಲ್ಸ್ ಜಂಟಿ ಪಾರ್ಟಿಯ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ್ದಾರೆ ಎಂದು ಹೇಳಿದರು. ಉನ್ನತ ಮಟ್ಟದಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎನ್‌ಕೌಂಟರ್ ನಡೆಯುತ್ತಿದೆ ಎಂದು ಅವರು ತಿಳಿಸಿದರು
ನಿನ್ನೆ ಸಂಜೆ ಕಥುವಾ ದಾಳಿಯಲ್ಲಿ ಇಬ್ಬರು ಭಯೋತ್ಪಾದಕರು ಭಾಗಿಯಾಗಿದ್ದು, ಅವರಲ್ಲಿ ಒಬ್ಬನನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಭದ್ರತಾ ಪಡೆಗಳು ಈಗ ಕಥುವಾದ ಹೀರಾನಗರ ಪ್ರದೇಶದಲ್ಲಿ ಮತ್ತೊಬ್ಬ ಭಯೋತ್ಪಾದಕನನ್ನು ಮಟ್ಟ ಹಾಕಲು ಕಾರ್ಯಾಚರಣೆ ನಡೆಸುತ್ತಿದ್ದೆವೆ ಎಂದು ತಿಳಿಸಿದರು.
ಭಯೋತ್ಪಾದಕರು ಹಲವಾರು ಮನೆಗಳಿಗೆ ಭೇಟಿ ನೀಡಿ ನೀರು ಕೇಳಿದ್ದಾರೆ, ಇದರಿಂದ ಅನುಮಾನಗೊಂಡ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ದೊರಕಿದೆ ಮತ್ತು ಕೆಲವು ಗ್ರಾಮಸ್ಥರು ಎಚ್ಚರಿಕೆ ನೀಡಿದಾಗ ಗುಂಡು ಹಾರಿಸಿದರು ಎಂದು ಪೊಲೀಸರು ತಿಳಿಸಿದ್ದಾರೆ. ಗುಂಡಿನ ದಾಳಿಯಲ್ಲಿ ಒಬ್ಬ ನಾಗರಿಕ ಗಾಯಗೊಂಡಿದ್ದಾನೆ , ಶ್ರೀ ಜೈನ್ ಸ್ಪಷ್ಟಪಡಿಸಿದರು ಮತ್ತು ಕಥುವಾ ದಾಳಿಯಲ್ಲಿ ಮೂವರು ಸಾವನ್ನಪ್ಪಿದ್ದಾರೆ ಎಂಬ ವರದಿಗಳನ್ನು ನಿರಾಕರಿಸಿದರು.
“ಹಲವು ಜನರು ಗಾಯಗೊಂಡಿದ್ದಾರೆ ಮತ್ತು ಮೂವರು ಸತ್ತಿದ್ದಾರೆ ಎಂಬ ವದಂತಿಗಳಿವೆ. ಆದರೆ ಒಬ್ಬ ನಾಗರಿಕ ಮಾತ್ರ ಗಾಯಗೊಂಡಿದ್ದಾನೆ, ಇದನ್ನು ಹೊರತುಪಡಿಸಿ ಒತ್ತೆಯಾಳುಗಳು ಮತ್ತು ಸಾವಿನ ಬಗ್ಗೆ ಎಲ್ಲಾ ಮಾಹಿತಿಯು ಸುಳ್ಳು ವದಂತಿಗಳು” ಎಂದು ಅವರು ಹೇಳಿದರು
ಎನ್‌ಕೌಂಟರ್ ವೇಳೆ ಹುತಾತ್ಮರಾದ ಭದ್ರತಾ ಪಡೆ ಸಿಬ್ಬಂದಿ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್)ಗೆ ಸೇರಿದವರು ಎಂದು ತಿಳಿಸಿದರು.
ಎಡಿಜಿಪಿ ಜೈನ್ ಅವರು ಕಥುವಾ ದಾಳಿಯನ್ನು “ಹೊಸ ಒಳನುಸುಳುವಿಕೆ” ಎಂದು ಕರೆದಿದ್ದಾರೆ. ಪಾಕಿಸ್ತಾನವು. ಯಾವಾಗಲೂ ನಮ್ಮ ದೇಶದಲ್ಲಿ ಶಾಂತಿಯುತ ಪರಿಸರವನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದಾರೆ. ಎಂದು ಅವರು ಹೇಳಿದರು.
ಎರಡು ದಿನಗಳ ಹಿಂದೆ, ರಿಯಾಸಿಯಲ್ಲಿ ಶಿವ ಖೋರಿ ಗುಹೆ ದೇವಸ್ಥಾನಕ್ಕೆ ತೆರಳುತ್ತಿದ್ದ ಬಸ್ ಮೇಲೆ ದಾಳಿ ನಡೆಸಲಾಯಿತು. ಬಸ್ ಚಾಲಕ ಪ್ರಯಾಣಿಕರನ್ನು ಇಳಿಸಲು ನಿರಾಕರಿಸಿದ ನಂತರ ಭಯೋತ್ಪಾದಕರು ಗುಂಡು ಹಾರಿಸಿದರು, ಆದರೆ ನಿಯಂತ್ರಣ ಕಳೆದುಕೊಂಡು ಕಮರಿಗೆ ಬಿದ್ದಿದ್ದಾರೆ ಎಂದು ಬಸ್ ಕಂಪನಿಯ ವ್ಯವಸ್ಥಾಪಕರು ತಿಳಿಸಿದ್ದಾರೆ. ಘಟನೆಯಲ್ಲಿ ಒಂಬತ್ತು ಮಂದಿ ಸಾವನ್ನಪ್ಪಿದ್ದು, 33 ಮಂದಿ ಗಾಯಗೊಂಡಿದ್ದಾರೆ. ಲಷ್ಕರ್-ಎ-ತೊಯ್ಬಾ ಕಮಾಂಡರ್ ಅಬು ಹಮ್ಜಾ ನಿರ್ದೇಶನದ ಮೇರೆಗೆ ದಾಳಿ ನಡೆಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave a Comment